

31st December 2025

ಕುಷ್ಟಗಿ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ ಹಾಗೂ ತಾಲೂಕ ಪಂಚಾಯತ ಕುಷ್ಟಗಿ ಮತ್ತು ಗ್ರಾಮ ಪಂಚಾಯತ ಹೂಲಗೇರಿ ವತಿಯಿಂದ ಇಂದು ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆಯನ್ನು ನಡೆಸಲಾಯಿತು
ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕವಿತಾ ರವಿ ಚವ್ಹಾಣ ವಹಿಸಿಕೊಂಡು ಮಾತನಾಡಿ ವಿಕಲಚೇತನರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಜೀವನವನ್ನು ನಡೆಸಬೇಕು ಎಂದರು.
ಪಿಡಿಓ ಆನಂದ ಯಲಗೇರಿ ಮಾತನಾಡಿ ಶೇಕಡಾ 5 ರಷ್ಟು ಅನುದಾನವನ್ನು ಎಲ್ಲಾ ವಿಕಲಚೇತನರು ಮನವಿ ಸಲ್ಲಿಸಿ ಸೂಕ್ತವಾದ ಸೌಲಭ್ಯ ನೀಡಲಾಗುತ್ತದೆ ಹಾಗೂ ಎಲ್ಲರೂ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು ಎಂದರು ಹಾಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ವಿಕಲಚೇತನರ ಸಂಘಟನೆಯ ಅಧ್ಯಕ್ಷರಾ ಚಂದಪ್ಪ ಗುಡಿಮನಿ ಇವರು ವಿಕಲಚೇತನರ ಸರ್ಕಾರಿ ಸೌಲಭ್ಯಗಳ ಕುರಿತು ಹಲವು ಮಾಹಿತಿಗಳನ್ನು ನೀಡಿದರು
ಗ್ರಾಮೀಣ ಪುನರ್ವಸತಿ ಕಾರ್ಯಕರ್ತಿಯಾದ ರೇಣುಕಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಸುರೇಶ್ ಬಲಗ್ಕುಂದಿ, ಮಹಿಬೂಬಸಾಬ ಉಂಡಿ , ಕಾಯಕ ಮಿತ್ರರಾದ ಗಂಗಮ್ಮ ವಾಲ್ಮೀಕಿ ,ಬಿಲ್ ಕಲೆಕ್ಟರ್ ಸಂಗಯ್ಯ ಹೊಸಮಠ ,ಲಂಕೇಶ್. ಮರಿಯಪ್ಪ ಸರ್ವ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿ ಊರಿನ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ ಹಾಗೂ ತಾಲೂಕ ಪಂಚಾಯತ ಕುಷ್ಟಗಿ ಮತ್ತು ಗ್ರಾಮ ಪಂಚಾಯತ ಹೂಲಗೇರಿ ವತಿಯಿಂದ ಇಂದು ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆಯನ್ನು ನಡೆಸಲಾಯಿತು.

ವಿಶ್ವಕರ್ಮ ಸಮಾಜದ ಭಾಂಧವರು ಕುಲಕಸುಬನ್ನು ಎಂದಿಗೂ ಮರೆಯಬಾರದು: ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ

ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ ಸಂಸದೆ ಪ್ರಿಯಾಂಕಾಗೆ ಕರವೇ ಮನವಿ

ನೀರು ಬಳಕೆದಾರರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ:ಮಧು ಜಿ.ಮಾದೇಗೌಡ